Petition to Karnataka's CM to withdraw the unilateral imposition of new charges by BBMP on citizens
							ಕರ್ನಾಟಕ ಸಿಎಂಗೆ ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್ಪಿ) ಮನವಿ
                        
						
                        
                            To,
                            
                                Shri D.K. Shivakumar
                                Hon’ble Deputy Chief Minister, Government of Karnataka
                            
                         
                        
                            ಗೆ,
                            
                              ಶ್ರೀ ಡಿ.ಕೆ. ಶಿವಕುಮಾರ್ 
                              ಗೌರವಾನ್ವಿತ ಉಪ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
                            
                         
                        We, the citizens of Bengaluru, demand the immediate reversal of the Solid Waste Management (SWM) User Fee implementation for FY 2025 - 26.
						ನಾವು, ಬೆಂಗಳೂರಿನ ನಾಗರಿಕರು, 2025–26 ನೇ ಆರ್ಥಿಕ ಸಾಲಿನ ಘನ ತ್ಯಾಜ್ಯ ನಿರ್ವಹಣಾ (ಎಸ್ಡಬ್ಲ್ಯುಎಮ್) ಬಳಕೆದಾರ ಶುಲ್ಕವನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಆಗ್ರಹಿಸುತ್ತೇವೆ.
                        Why this matters
                        Thousands of Bengaluru residents are being charged twice for waste collection because GBA rushed the new SWM User Fee without proper planning. People are paying for services GBA doesn’t even provide. This must be stopped now.
                        Here’s what went wrong:
                        1. Large apartments charged twice:
                        BBMP added the SWM fee before introducing the “Bulk Waste Generator” option. The “Bulk Waste Generator” exemption was introduced only around 20 April 2025, after thousands had already paid the SWM fee with property tax. Large apartments have now paid twice, once to GBA and once to empanelled vendors even though GBA provides no waste collection to them.
                        2. No Clarity for Smaller Apartments (<100 units): 
                        GBA’s ever-changing definition of “bulk generator” (First 20 - Then 50 - Now 100 units) has trapped smaller apartments that have been using private vendors. Residents of these apartments can neither choose the “bulk waste generator” option, nor pay as they will end up making a double payment - one to the empanelled vendor and another to GBA, for a service that GBA does not even provide to their apartment.
                        3. Unjust Fee on Vacant Plots:
                        Charging SWM fees on vacant plots where no waste is generated or collected is unreasonable and unfair. Yet, many owners have already been billed.
                        4.Irregular Collection for Independent Houses:
                        In several areas, waste collection from independent houses is irregular or completely absent, even though residents are paying the SWM User Fee. Citizens are being charged for a service that GBA is not consistently delivering.
                        Our Demands:
                        
                            - Reverse the SWM User Fee implementation for 2025–26 immediately.
- Adjust all already-paid amounts against next year’s property tax.
- Waive any penalties that may have been levied for non-payment.
- Reintroduce the fee only next financial year after proper stakeholder consultation with RWAs, citizen groups, and bulk waste generators ensuring fairness and clear definitions.
- Streamline and resolve all the abovementioned issues before reintroducing the SWM User Fee next year.
This is not a call to avoid responsibility. It’s a call for fairness, accountability, and good governance.
                        Bengaluru’s residents are ready to do their part, but not at the cost of being penalized for GBA’s poor implementation.
                        Sign this petition if you believe citizens should not pay twice for a service they never received. Let’s stand together for a fair, transparent, and citizen-first Bengaluru.
                        ಇದು ಏಕೆ ತಪ್ಪಾಗಿದೆ:
                        ದೊಡ್ಡ ಅಪಾರ್ಟ್ಮೆಂಟ್ಗಳಿಗೆ ಎರಡು ಬಾರಿ ಶುಲ್ಕ:
                        ಬಿಬಿಎಂಪಿ “ಬಲ್ಕ್ ವೇಸ್ಟ್ ಜನರೇಟರ್” ಆಯ್ಕೆಯನ್ನು ಪರಿಚಯಿಸುವ ಮೊದಲೇ ಎಸ್ಡಬ್ಲ್ಯುಎಮ್ ಶುಲ್ಕವನ್ನು ಸೇರಿಸಿತು. “ಬಲ್ಕ್ ವೇಸ್ಟ್ ಜನರೇಟರ್” ವಿನಾಯಿತಿ ಆಯ್ಕೆಯನ್ನು 2025ರ ಏಪ್ರಿಲ್ 20ರ ಸುಮಾರಿಗೆ ಮಾತ್ರ ಪರಿಚಯಿಸಲಾಯಿತು  ಅಂದರೆ, ಸಾವಿರಾರು ಜನರು ಈಗಾಗಲೇ ಆಸ್ತಿ ತೆರಿಗೆಯೊಂದಿಗೆ ಎಸ್ಡಬ್ಲ್ಯುಎಮ್ ಶುಲ್ಕವನ್ನು ಪಾವತಿಸಿದ್ದರು. ದೊಡ್ಡ ಅಪಾರ್ಟ್ಮೆಂಟ್ಗಳು ಈಗ ಎರಡು ಬಾರಿ ಹಣ ಕೊಟ್ಟಿವೆ ಒಂದು ಬಾರಿ ಬಿಬಿಎಂಪಿಗೆ ಮತ್ತು ಮತ್ತೊಂದು ಬಾರಿ ಖಾಸಗಿ ಪ್ಯಾನೆಲ್ ಮಾರಾಟಗಾರರಿಗೆ, ಬಿಬಿಎಂಪಿ ಅವರು ಯಾವುದೇ ತ್ಯಾಜ್ಯ ಸಂಗ್ರಹಣಾ ಸೇವೆ ನೀಡದೇ ಇದ್ದರೂ ಸಹ.
                        ಸಣ್ಣ ಅಪಾರ್ಟ್ಮೆಂಟ್ಗಳಿಗೆ (100 ಘಟಕಗಳಿಗಿಂತ ಕಡಿಮೆ) ಸ್ಪಷ್ಟತೆ ಇಲ್ಲ:
                        ಬಿಬಿಎಂಪಿಯ “ಬಲ್ಕ್ ಜನರೇಟರ್” ವ್ಯಾಖ್ಯಾನವು ಆಗಾಗ ಬದಲಾಗುತ್ತಿದೆ (ಮೊದಲು 20, ನಂತರ 50, ಈಗ 100 ಘಟಕಗಳು). ಇದರ ಪರಿಣಾಮವಾಗಿ ಖಾಸಗಿ ಮಾರಾಟಗಾರರನ್ನು ಬಳಸಿಕೊಂಡು ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಸಣ್ಣ ಅಪಾರ್ಟ್ಮೆಂಟ್ಗಳು ಸಂಕಷ್ಟಕ್ಕೆ ಸಿಲುಕಿವೆ. ಇವರು “ಬಲ್ಕ್ ವೇಸ್ಟ್ ಜನರೇಟರ್” ಆಯ್ಕೆ ಮಾಡಲೂ ಆಗುವುದಿಲ್ಲ, ಪಾವತಿಸಲೂ ಆಗುವುದಿಲ್ಲ ಏಕೆಂದರೆ ಅವರು ಎರಡು ಬಾರಿ ಹಣ ಕೊಡಬೇಕಾಗುತ್ತದೆ  ಒಂದು ಬಾರಿ ಖಾಸಗಿ ಮಾರಾಟಗಾರರಿಗೆ ಮತ್ತು ಮತ್ತೊಂದು ಬಾರಿ ಬಿಬಿಎಂಪಿಗೆ, ಬಿಬಿಎಂಪಿ ಅವರು ಅಪಾರ್ಟ್ಮೆಂಟ್ಗೆ ಯಾವುದೇ ಸೇವೆ ನೀಡದಿದ್ದರೂ.
                        ಖಾಲಿ ಜಾಗಗಳ ಮೇಲೆ ಅನ್ಯಾಯಕರ ಶುಲ್ಕ:
                        ತ್ಯಾಜ್ಯ ಉತ್ಪಾದನೆಯೂ ಇಲ್ಲ, ಸಂಗ್ರಹಣೆಯೂ ಇಲ್ಲದ ಖಾಲಿ ಜಾಗಗಳಿಗೆ ಎಸ್ಡಬ್ಲ್ಯುಎಮ್ ಶುಲ್ಕ ವಿಧಿಸುವುದು ಅನ್ಯಾಯಕರ ಮತ್ತು ಅಸಂಗತವಾಗಿದೆ. ಆದರೂ, ಅನೇಕ ಖಾಲಿ ಜಾಗ ಮಾಲೀಕರು ಈಗಾಗಲೇ ಬಿಲ್ ಪಡೆದಿದ್ದಾರೆ.
                        ಸ್ವತಂತ್ರ ಮನೆಗಳ ತ್ಯಾಜ್ಯ ಸಂಗ್ರಹಣೆಯಲ್ಲಿ ಅಸಮರ್ಪಕತೆ:
                        ಅನೇಕ ಪ್ರದೇಶಗಳಲ್ಲಿ ಸ್ವತಂತ್ರ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ನಿಯಮಿತವಾಗಿ ನಡೆಯುವುದಿಲ್ಲ ಅಥವಾ ಸಂಪೂರ್ಣವಾಗಿ ನಿಂತಿದೆ. ಆದರೂ, ನಿವಾಸಿಗಳು ಎಸ್ಡಬ್ಲ್ಯುಎಮ್ ಬಳಕೆದಾರ ಶುಲ್ಕ ಪಾವತಿಸುತ್ತಿದ್ದಾರೆ. ಬಿಬಿಎಂಪಿ ನಿರಂತರವಾಗಿ ಒದಗಿಸದ ಸೇವೆಗೆ ನಾಗರಿಕರು ಹಣ ಪಾವತಿಸುತ್ತಿದ್ದಾರೆ.
                        ನಮ್ಮ ಬೇಡಿಕೆಗಳು:
                        
                            - 2025–26 ನೇ ಸಾಲಿನ ಎಸ್ಡಬ್ಲ್ಯುಎಮ್ ಬಳಕೆದಾರ ಶುಲ್ಕವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು.
- ಈಗಾಗಲೇ ಪಾವತಿಸಿದ ಮೊತ್ತಗಳನ್ನು ಮುಂದಿನ ಸಾಲಿನ ಆಸ್ತಿ ತೆರಿಗೆಯ ವಿರುದ್ಧ ಸರಿಹೊಂದಿಸಬೇಕು.
- ಪಾವತಿ ಮಾಡದಿದ್ದಕ್ಕಾಗಿ ವಿಧಿಸಲಾದ ಯಾವುದೇ ದಂಡಗಳನ್ನು ಮನ್ನಾ ಮಾಡಬೇಕು.
- ಮುಂದಿನ ಆರ್ಥಿಕ ವರ್ಷದಲ್ಲಿ ಈ ಶುಲ್ಕವನ್ನು ಪುನಃ ಪರಿಚಯಿಸುವ ಮೊದಲು ಆರ್ಡಬ್ಲ್ಯುಎಗಳು, ನಾಗರಿಕ ಸಂಘಟನೆಗಳು ಮತ್ತು ಬಲ್ಕ್ ವೇಸ್ಟ್ ಜನರೇಟರ್ಗಳೊಂದಿಗೆ ಸೂಕ್ತ ಸಲಹೆಮಾಡಿ, ನ್ಯಾಯಯುತ ಮತ್ತು ಸ್ಪಷ್ಟ ವ್ಯಾಖ್ಯಾನಗಳೊಂದಿಗೆ ಮಾತ್ರ ಜಾರಿಗೆ ತರಬೇಕು.
-  ಮೇಲಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪ್ರಕ್ರಿಯೆಯನ್ನು ಸರಳ ಮತ್ತು ಸಮನ್ವಿತಗೊಳಿಸಿ ನಂತರ ಮಾತ್ರ ಎಸ್ಡಬ್ಲ್ಯುಎಮ್ ಶುಲ್ಕವನ್ನು ಪುನಃ ಪರಿಚಯಿಸಬೇಕು.
ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಹೋರಾಟವಲ್ಲ. ಇದು ನ್ಯಾಯ, ಉತ್ತರದಾಯಿತ್ವ ಮತ್ತು ಸುಶಾಸನದ ಹೋರಾಟ.
                        ಬೆಂಗಳೂರು ನಿವಾಸಿಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ ಆದರೆ ಬಿಬಿಎಂಪಿಯ ದುರ್ಬಲ ಜಾರಿಗೆ ಕಾರಣವಾಗಿ ದಂಡಿತವಾಗುವ ಬೆಲೆಗೆ ಅಲ್ಲ.
                        ನೀವು ಸಹ ನಾಗರಿಕರು ಪಡೆಯದ ಸೇವೆಗೆ ಎರಡು ಬಾರಿ ಪಾವತಿಸಬಾರದೆಂದು ನಂಬಿದರೆ, ಈ ಮನವಿಗೆ ಸಹಿ ಹಾಕಿ.
 ನ್ಯಾಯಯುತ, ಪಾರದರ್ಶಕ ಮತ್ತು ನಾಗರಿಕ-ಪ್ರಥಮ ಬೆಂಗಳೂರಿಗಾಗಿ ಒಟ್ಟಾಗಿ ನಿಲ್ಲೋಣ.
                        
                            Yours sincerely,
                            ತಮ್ಮ ವಿಶ್ವಾಸಿ,
                            Name
                            ಹೆಸರು
                            Address
                            ವಿಳಾಸ
                            
                            
                                Read Less
                            Read Less