Demanding Complete Ward-Level Financial Transparency from GBA & the Karnataka Government.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಕರ್ನಾಟಕ ಸರ್ಕಾರದಿಂದ ಸಂಪೂರ್ಣ ವಾರ್ಡ್ ಮಟ್ಟದ ಆರ್ಥಿಕ ಪಾರದರ್ಶಕತೆಗೆ ಆಗ್ರಹ.
WHERE HAS BENGALURU'S ₹50,000 CRORE GONE?
ಬೆಂಗಳೂರಿನ ₹50,000 ಕೋಟಿ ಎಲ್ಲಿ ಹೋಯಿತು?
Why does this matter?
ಇದು ಏಕೆ ಮುಖ್ಯ?
Over the last 10 years, nearly ₹50,000 crore has been spent on civic works across Bengaluru, including roads, footpaths, drains and other essential infrastructure.
ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಾದ್ಯಂತ ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿಗಳು ಮತ್ತು ಇತರ ಅಗತ್ಯ ಮೂಲಸೌಕರ್ಯಗಳು ಸೇರಿದಂತೆ ನಾಗರಿಕ ಕಾಮಗಾರಿಗಳಿಗೆ ಸುಮಾರು ₹50,000 ಕೋಟಿ ಖರ್ಚು ಮಾಡಲಾಗಿದೆ.
Yet, residents continue to struggle with pothole-ridden roads, broken footpaths, overflowing drains, poor streetlighting and inadequate civic infrastructure.
ಆದರೂ, ನಾಗರಿಕರು ಗುಂಡಿಗಳಿಂದ ತುಂಬಿದ ರಸ್ತೆಗಳು, ಮುರಿದ ಪಾದಚಾರಿ ಮಾರ್ಗಗಳು, ಉಕ್ಕಿ ಹರಿಯುವ ಚರಂಡಿಗಳು, ಕಳಪೆ ಬೀದಿದೀಪ ವ್ಯವಸ್ಥೆ ಮತ್ತು ಅಸಮರ್ಪಕ ನಾಗರಿಕ ಮೂಲಸೌಕರ್ಯಗಳಿಂದ ಇನ್ನೂ ಪರದಾಡುತ್ತಿದ್ದಾರೆ.
If thousands of crores have been spent, why are these basic problems still unresolved? Where has the money gone? What work has actually been completed? Who is accountable?
ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಈ ಮೂಲಭೂತ ಸಮಸ್ಯೆಗಳು ಇನ್ನೂ ಏಕೆ ಬಗೆಹರಿದಿಲ್ಲ? ಹಣ ಎಲ್ಲಿ ಹೋಯಿತು? ನಿಜವಾಗಿ ಯಾವ ಕಾಮಗಾರಿಗಳು ಪೂರ್ಣಗೊಂಡಿವೆ? ಇದಕ್ಕೆ ಯಾರು ಹೊಣೆ?
Citizens have a right to know
ತಿಳಿದುಕೊಳ್ಳುವ ಹಕ್ಕು ನಾಗರಿಕರಿಗಿದೆ
Every rupee spent on civic works comes from public money. Citizens have the right to know how their taxes are being used.
ನಾಗರಿಕ ಕಾಮಗಾರಿಗಳಿಗೆ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯೂ ಸಾರ್ವಜನಿಕರ ಹಣ. ತಮ್ಮ ತೆರಿಗೆ ಹಣವನ್ನು ಹೇಗೆ ಬಳಸಲಾಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗಿದೆ.
Finding this information should not require people to search through multiple websites, records and departments.
ಈ ಮಾಹಿತಿಗಾಗಿ ಜನರು ಹಲವಾರು ವೆಬ್ಸೈಟ್ಗಳು, ದಾಖಲೆಗಳು ಮತ್ತು ಇಲಾಖೆಗಳಲ್ಲಿ ಹುಡುಕಾಡುವಂತಾಗಬಾರದು.
Through our #LekkaBeku campaign, Bengaluru NavaNirmana Party (BNP) has brought together 10 years of BBMP project data across all 198 wards, making it easier for citizens to examine the spending in their wards.
ನಮ್ಮ #LekkaBeku ಅಭಿಯಾನದ ಮೂಲಕ, ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್ಪಿ) ಎಲ್ಲಾ 198 ವಾರ್ಡ್ಗಳ 10 ವರ್ಷಗಳ ಬಿಬಿಎಂಪಿ ಕಾಮಗಾರಿ ದತ್ತಾಂಶವನ್ನು ಒಂದೆಡೆ ಸಂಗ್ರಹಿಸಿದೆ. ಇದರಿಂದ ನಾಗರಿಕರು ತಮ್ಮ ವಾರ್ಡ್ನಲ್ಲಿನ ಖರ್ಚನ್ನು ಸುಲಭವಾಗಿ ಪರಿಶೀಲಿಸಬಹುದು.
Check your ward's spending
ನಿಮ್ಮ ವಾರ್ಡ್ನ ಖರ್ಚು ನೋಡಿ
What are we demanding?
ನಮ್ಮ ಬೇಡಿಕೆಗಳೇನು?
- Make civic spending transparent: Publish complete details of civic projects, including the estimated cost, amount spent, contractor details, work status and completion date.
- Provide ward-wise accounts: Make all project and expenditure details easily accessible to citizens, organised by ward and locality.
- Ensure accountability: Conduct proper inspections to verify whether the work shown as completed has actually been carried out and meets the required standards.
- Account for public money: Take action wherever irregularities, incomplete works or misuse of public funds are found.
- Give local residents a real say: Hold regular, mandatory Ward Committee meetings with BBMP officers present. Local residents must review and sign off on neighborhood work before new funds are released.
- Ensure regular public updates: Make project progress and expenditure information available and update it regularly.
- ನಾಗರಿಕ ವೆಚ್ಚವನ್ನು ಪಾರದರ್ಶಕಗೊಳಿಸಿ: ಅಂದಾಜು ವೆಚ್ಚ, ಖರ್ಚಾದ ಮೊತ್ತ, ಗುತ್ತಿಗೆದಾರರ ವಿವರ, ಕಾಮಗಾರಿಯ ಸ್ಥಿತಿ ಮತ್ತು ಪೂರ್ಣಗೊಂಡ ದಿನಾಂಕ ಸೇರಿದಂತೆ ನಾಗರಿಕ ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ಪ್ರಕಟಿಸಿ.
- ವಾರ್ಡ್ವಾರು ಲೆಕ್ಕ ನೀಡಿ: ಎಲ್ಲಾ ಕಾಮಗಾರಿ ಮತ್ತು ವೆಚ್ಚದ ವಿವರಗಳನ್ನು ವಾರ್ಡ್ ಮತ್ತು ಬಡಾವಣೆವಾರು ವಿಂಗಡಿಸಿ, ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿ.
- ಹೊಣೆಗಾರಿಕೆಯನ್ನು ಖಚಿತಪಡಿಸಿ: ಪೂರ್ಣಗೊಂಡಿದೆ ಎಂದು ತೋರಿಸಲಾದ ಕಾಮಗಾರಿಗಳು ನಿಜವಾಗಿಯೂ ನಡೆದಿವೆಯೇ ಮತ್ತು ಅಗತ್ಯ ಗುಣಮಟ್ಟವನ್ನು ಹೊಂದಿವೆಯೇ ಎಂಬುದನ್ನು ಸರಿಯಾದ ತಪಾಸಣೆ ನಡೆಸಿ ಪರಿಶೀಲಿಸಿ.
- ಸಾರ್ವಜನಿಕ ಹಣಕ್ಕೆ ಲೆಕ್ಕ ಕೊಡಿ: ಅಕ್ರಮಗಳು, ಅಪೂರ್ಣ ಕಾಮಗಾರಿಗಳು ಅಥವಾ ಸಾರ್ವಜನಿಕ ಹಣದ ದುರುಪಯೋಗ ಕಂಡುಬಂದಲ್ಲೆಲ್ಲಾ ಕ್ರಮ ಕೈಗೊಳ್ಳಿ.
- ಸ್ಥಳೀಯ ನಿವಾಸಿಗಳಿಗೆ ನಿಜವಾದ ಧ್ವನಿ ನೀಡಿ: ಬಿಬಿಎಂಪಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಿಯಮಿತ ಹಾಗೂ ಕಡ್ಡಾಯ ವಾರ್ಡ್ ಸಮಿತಿ ಸಭೆಗಳನ್ನು ನಡೆಸಿ. ಹೊಸ ಅನುದಾನ ಬಿಡುಗಡೆ ಮಾಡುವ ಮೊದಲು, ಸ್ಥಳೀಯ ನಿವಾಸಿಗಳು ತಮ್ಮ ಪ್ರದೇಶದ ಕಾಮಗಾರಿಗಳನ್ನು ಪರಿಶೀಲಿಸಿ ಅನುಮೋದಿಸಬೇಕು.
- ನಿಯಮಿತ ಸಾರ್ವಜನಿಕ ಮಾಹಿತಿ ನೀಡಿ: ಕಾಮಗಾರಿಗಳ ಪ್ರಗತಿ ಮತ್ತು ವೆಚ್ಚದ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗಿಸಿ, ಅದನ್ನು ನಿಯಮಿತವಾಗಿ ನವೀಕರಿಸಿ.
We demand transparency, accountability and a proper account of every rupee spent on our city.
ನಮ್ಮ ನಗರಕ್ಕಾಗಿ ಖರ್ಚು ಮಾಡಿದ ಪ್ರತಿಯೊಂದು ರೂಪಾಯಿಗೂ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸರಿಯಾದ ಲೆಕ್ಕವನ್ನು ನಾವು ಆಗ್ರಹಿಸುತ್ತೇವೆ.
Yours sincerely,
ತಮ್ಮ ವಿಶ್ವಾಸಿ,
Name
ಹೆಸರು
Address
ವಿಳಾಸ
Sign this petition
ಈ ಮನವಿಗೆ ಸಹಿ ಮಾಡಿ